Socialize

Moral stories in kannada


Kannada Stories - ಮೂರ್ಖ ಮೊಸಳೆ


ಒಂದು ನದಿಯಲ್ಲಿ ಒಂದು ಜೋಡಿ ಮೊಸಳೆಯು ವಾಸಿಸುತಿತ್ತು. ಗಂಡು ಮೊಸಳೆಯು ದಿನಾಲು ದಂಡೆಯಮೇಲೆ ಸೂರ್ಯನ ಶಾಖವನ್ನು ಪಡೆಯಲು ಬರುತಿತ್ತು  ಅಲ್ಲಿಯೇ ಎದ್ದ ಒಂದು ಮಾವಿನ ಮರದಮೇಲೆ ಒಂದು ಕೋತಿಯು ವಾಸವಿತ್ತು ಆ ಒಂದು ಮಾವಿನ ಮರದ ಮೇಲೆ ಸಿಹಿಯಾದ ಮಾವಿನ ಹಣ್ಣುಗಳು ಬಿಟ್ಟವು ಇದನ್ನು ಕೋತಿಯು ತುಂಬಾ ಆನಂದ ದಿಂದ ತಿನ್ನುತಿತ್ತು ಇದನ್ನು ನೋಡಿದ ಮೊಸಳೆಗೂ ಮಾವಿನ ಹಣ್ಣು ತಿನ್ನಲು ಆಸೆಯಾಯಿತು ಇದನ್ನು ನೋಡಿದ ಕೋತಿಯು ಕೆಲವು ಮಾವಿನ ಹಣ್ಣುಗಳನ್ನು ಕೆಳಗೆ ಎಸೆಯಿತು ಅವುಗಳನ್ನು ಮೊಸಳೆಯು ಕೋತಿಗೆ ಧನ್ಯವಾದ ತಿಳಿಸಿತು. 

ಹೀಗೆ ದಿನಗಳು ಕೆಳೆದವು ಮುಂದೆ ಕೋತಿ ಮತ್ತು ಮೊಸಳೆಗಳು ಎರಡು ಒಳ್ಳೆಯ ಸ್ನೇಹಿತರದವು ಹೀಗೆ ಒಂದು ದಿನ ಕೋತಿಯು ಕೆಲವು ಹಣ್ಣುಗಳನ್ನು ಮೊಸಳೆಗೆ ಕೊಟ್ಟು ತೆಗೆದುಕೊಂಡು ನಿನ್ನ ಮನೆಯವರಿಗೂ ಕೊಡು ಎಂದಿತು ಮೊಸಳೆಯು ಆನಂದದಿಂದ ತೆಗೆದುಕೊಂಡು ಹೋಗಿ ತನ್ನಹೆಂಡತಿಗೆ ಕೊಡುತ್ತದೆ ಆ ರುಚಿಯಾದ ಹಣ್ಣನ್ನು ಸವಿದ ಹೆಣ್ಣು ಮೊಸಳೆಯು ತನ್ನ ದುಷ್ಟ ಬುದ್ದಿಯನ್ನು ಉಪಯೋಗಿಸಿ ಯೋಚಿಸುತ್ತಾ “ಈ ಹಣ್ಣುಗಳೇ  ಇಷ್ಟು ರುಚಿಯಾಗಿವೆ ಇನ್ನು ಆ ಕೋತಿಯ ಹೃದಯ ಎಷ್ಟು ರುಚಿಯಾಗಿರಬಾರದು”. ಹೀಗೆಂದು ಯೋಚಿಸುತ್ತದೆ. 


ಈ ತನ್ನ ದುಷ್ಟ ವಿಚಾರವನ್ನು ಗಂಡು ಮೊಸಳೆಯ ಮುಂದೆ ಹೇಳುತ್ತದೆ. ಈ ವಿಷಯವನ್ನು ಕೇಳಿದ ಗಂಡು ಮೊಸಳೆಯು ಕೋಪಗೊಂಡು “ಅವನು ನನ್ನ ಸ್ನೇಹಿತ ಅವನಿಗೆ ನಾನು ಮೋಸ ಮಾಡಲಾರೆ ಎಂದು ಗದರಿ ಹೇಳಿತು ಇದನ್ನು ಕೇಳದ ಹೆಣ್ಣು ಮೊಸಳೆಯು ತನ್ನ ಪಟ್ಟು ಬಿಡದೆ ಊಟವನ್ನು ಮಾಡದೆ ಕುಳಿತುಬಿಡುತ್ತದೆ ಈ ಸ್ಥಿತಿಯನ್ನು ನೋಡಲಾಗದೆ ಗಂಡು ಮೊಸಳೆಯು ಹೃದಯವನ್ನು ತರಲು ಒಪ್ಪಿ ಹೋರಾಡುತ್ತದೆ. ಮೊಸಳೆಯು ಕೋತಿಯ ಬಳಿ ಹೋಗಿ ಗೆಳೆಯ ನೀನು ಕೊಟ್ಟ ಹಣ್ಣನ್ನು ತಿಂದ ನನ್ನ ಹೆಂಡತಿ ನಿನ್ನನ್ನು ಮನೆಗೆ ಭೋಜನಕ್ಕೆ ಕರೆದ್ದಿದಾಳೆ ದಯವಿಟ್ಟು ಬಾ ಗೆಳೆಯ ಎಂದು ಮೊಸಳೆಯು ಕೋತಿಗೆ ಕರೆಯಿತು ಈ ಮಾತನ್ನು ಕೇಳಿದ ಕೋತಿಯು ಚಂಗನೆ ಜಿಗಿದು ಮೊಸಳೆಯ ಬೆನ್ನೇರಿ ಕುಳಿತು ಹೋರಡಿತು.
ಮುಂದೆ ಹೊರಟಾಗ ಮೊಸಳೆಗೆ ತನ್ನ ತಪ್ಪಿನ ಅರಿವಾಗಿ ಕೋತಿಗೆ ಎಲ್ಲಾ ವಿಚಾರವನ್ನುಹೇಳುತ್ತದೆ ಇದನ್ನು ಕೇಳಿದ ಕೋತಿಯು ಗಾಬರಿಗೊಂಡು ಒಂದು ಉಪಾಯವನ್ನುಮಾಡುತ್ತದೆ.


“ಅಯ್ಯೋ ಗೆಳೆಯ ಮೊದಲೇ ಹೇಳಬಾರದೇ ನಾವು ಕಪಿಗಳು ನಮ್ಮ ಹೃದಯವನ್ನು ನಾವು ಮರದಮೇಲೆ ಭದ್ರವಾಗಿ ಇಡುತ್ತೆವೆ”.  ಎಂದು ಹೇಳಿ ಹಿಂದೆ ಹೋರಡುತ್ತದೆ. ಹೀಗೆ ಮರದ ಹತ್ತಿರ ಬಂದ್ದ ತಕ್ಷಣವೇ ಕೋತಿಯು ಚಂಗನೆ ಮರವೇರಿ ಕುಳಿತುಕೊಳ್ಳುತ್ತದೆ.


ಹೀಗೆ ಮರದ ಹತ್ತಿರ ಬಂದ್ದ ತಕ್ಷಣವೇ ಕೋತಿಯು ಚಂಗನೆ ಮರವೇರಿ ಕುಳಿತು ಮೊಸಳೆಗೆ “ ಏ ಮೂರ್ಖ ಮೊಸಳೆ ಯಾರು ತಾನೇ ತಮ್ಮ ಹೃದಯವನ್ನು ಮರದಮೇಲೆ ಇಡುತ್ತಾರೆ ನಾನು ನಿನಗೆ ತಿನ್ನಲು ಹಣ್ಣನ್ನು ಕೊಟ್ಟೆ ಆದರೆ ನೀನು ನನ್ನ ಹೃದಯವನ್ನೇ ಬೇಡಿದೆ ನಿನ್ನ ಮುಖವನ್ನು ನನಗೆ ತೋರಿಸಬೇಡ ಎಂದು ಸಿಟ್ಟಿನಿಂದ ಹೇಳುತ್ತದೆ. ಇದನ್ನು ಕೇಳಿ ಮೊಸಳೆಯು ಸಪ್ಪೆಯಾಗಿ ಬೇಸರಗೊಂಡು ಮರಳಿ ನೀರಿಗೆ ಒರಟುಹೋಗುತ್ತದೆ Kannada moral stories - ಚಿನ್ನದ ಬಾತುಕೋಳಿ

ಒಂದು ಹಳ್ಳಿಯಲ್ಲಿ ರೈತನು ವಾಸವಿದ್ದನು ಅವನು ತುಂಬಾ ಶ್ರಮ
ಜೀವಿಯಾಗಿದ್ದನು ದಿನಾಲು ತನ್ನ ಕೆಲಸವನ್ನು ಮುಗಿಸಿ ಸಂಜೆಯ ಮೇಲೆ ಮನೆಗೆ ಬರುತ್ತಿದ್ದನು ಹೀಗೆ ಒಂದು ದಿನ ಮನೆಗೆ ಬರುವಾಗ ಸಂಜೆ ಕೆರೆಯಲ್ಲಿ ಒಂದು ಬಾತುಕೋಳಿ ಸಿಗುತ್ತದೆ  ಆ ಬಾತುಕೋಳಿಯನ್ನು ತೆಗೆದುಕೊಂಡು ರೈತನು ಮನೆಗೆ ಬರುತ್ತಾನೆ. 

ಆ ಬಾತುಕೋಳಿಯು ಸಾಮಾನ್ಯವಾದ ಬಾತುಕೋಳಿಯಾಗಿರಲಿಲ್ಲ ಆ ಬಾತುಕೋಳಿಯು ದಿನಾಲುಒಂದು ಬಂಗಾರದ ಮೊಟ್ಟೆಯನ್ನು ಇಡುತಿತ್ತು ಒಂದುದಿನ ರೈತನು ಮನೆಗೆ ಬಂದು ನೋಡಿದಾಗ ದಂಗಾಗಿ ಆ ಮೊಟ್ಟೆಯನ್ನು ತೆಗೆದುಕೊಂಡು ಪಟ್ಟಣದಲ್ಲಿ ಮಾರಿ ಹಣವನ್ನು ತಂದು ತನ್ನ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುತ್ತಾನೆ. 

ಹೀಗೆ ರೈತನಿಗೆ ಆಸೆಯೂ ಹೆಚ್ಚಾಯಿತಾಹೋಯಿತು ಆ ಬಂಗಾರದ ಮೊಟ್ಟೆಗಳ್ಳನ್ನು ಮಾರಿ ತುಂಬಾ ಶ್ರೀಮಂತನಾಗುತ್ತಾನೆ. ಈ ಅಮಲಿನಲ್ಲಿ ರೈತನಿಗೆ ದುಷ್ಟ ವಿಚಾರಬಂದು ಅವನು ಆ ಬಾತುಕೋಳಿಯನ್ನು ಕೊಲ್ಲುತ್ತಾನೆ ಇದರಿಂದ ಆ ಬಾತುಕೋಳಿಯೂ ವಿಲವಿಲ ವದ್ದಾಡಿ ಸತ್ತುಹೋಗುತ್ತದೆ.  ರೈತನಿಗೆ ಆ ಬಾತುಕೋಳಿಯಲ್ಲಿ ಯಾವುದೇ ಮೊಟ್ಟೆಯು ಸಿಗುವುದಿಲ್ಲ ಇದರಿಂದ ಬೇಸರಗೊಂಡು ಆ ಮುಗ್ದ ಬಾ ಆತುಕೊಳಿಯನ್ನು ಕೊಂತಿದಕ್ಕೆ ಪಶ್ಚಾತಾಪ ಪಡುತ್ತಾನೆ. Post a comment

0 Comments